10
1
2
3
4
5
6
7
8

ಶಿಕ್ಷಕರ ಸ್ವರಚಿತ ಕವನಗಳು

ಶಿಕ್ಷಕ ಸಾಹಿತಿಗಳು ಶ್ರೀ ರಾಹೀಲ್ ರಾಜಾಭಕ್ಷು ಸಿ.ಎಮ್.

ನೆನಪಿನಂಗಳದ ಕವನಗಳು
[23/05, 2:58 p.m.] A Raju: ಅವಳು ನನ್ನ ಕಣ್ಣು

 ಜೀವ ಉಸಿರಿನ‌ ನನ್ನಾಕೆ
ತಿದ್ದಿ ಕೈ ಹಿಡಿದು ನಡೆಸಿದಾಕೆ
ಆಸರೆಯಾಗಿ ನನಗೆ ನೆರಳಾಕೆ
ತುತ್ತು ತಿನ್ನಿಸಿ ತೂಗಿದಾಕೆ
ಎನ್ನ ಮಾತಿನ ನುಡಿ ನನ್ನವ್ವ

ಊರಿನ ಮಂದಿ ಕೂಡ ಜಗಳನಾಡಿದಗ
ನನಗೆ ನೀತಿಕಥೆ ಉಣ್ಣುಬಡಿಸಿದೆ
ಶಾಂತಿಯ ಮಂತ್ರ ನಿನ್ನ ಸೂತ್ರ
ಸದ್ಗುಣಗಳ ಆಗರ ನೀ ನನ್ನಮ್ಮ

ಶಾಲೆಗೆ ದಿನ ನಿ ಕರೆತರಲು
ನಾ ಹ್ಯಾಂಗ ಮರೆಯಿಲಿ ಆ ದಿನಗಳ
ಕೂಲಿ ಮಾಡಿ ಶಾಲೆ ಜ್ಞಾನ ಕೂಡಿಸಿದೆ
ಸಮಾಜದಲ್ಲಿ ನನಗೆ ಸ್ಥಾನ ನೀಡಿದೆ..

ದೇಶದ ಕಥೆ ಹೇಳಿ ದೇಶಾಭಿಮಾನ ಬೆಳಿಸಿದೆ
ನೀತಿಯ ಕಥೆಯ ಹೇಳಿ ನೀತಿವಂತನ ಮಾಡಿದೆ.
ಗೌರವ ಕಾಣುವ ಹುದ್ದೆಗೆ ಕಾರಣಳಾದೆ
ನಿನ್ನಾ ಋಣ ಏಳೇಳ ಜನ್ಮಕೂ ಮರೆಯದಂಗ ಮಾಡಿದೆ...


ತೂಸು ನೋವಾದರೂ ಸಹಿಸದ ಕರುಣೆ
ಪ್ರೀತಿಯ ಮಮತೆಯ ಕರುಣಾಮಯೆ
ನಿನ್ನ  ಕೈಯಲ್ಲಿ ಬೆಳದನಾ 
ಸೆರೆಯಾದೆ ಅನ್ಯರ ಪ್ರೀತಿ ಕಂಕಳದಲ್ಲಿ

ನಿನ್ನ ಸ್ಥಾನ ತುಂಬಲು ಸಾದ್ಯಾನ ?
 ನನ್ನವ್ವ‌....
ನಿನಗಾದ ಅನುಭವ ಸಿಗಲಾರದು 
ನಿ ಏಕೆ ಬಿಟ್ಟು ಕೊಟ್ಟೆ ನಾ ಬೇಸರವಾದೇನು.

ಜಗವೆಲ್ಲ ಬೆಳಗುವ ಸೂರ್ಯ ತಲೆಬಾಗುವ
ನಿನ್ನ ಕಾರ್ಯ ನೋಡಿ
ಶಿವನು ನಮಸ್ಕರಿಸುವ....
ನಿನ್ನಾ  ವಾತ್ಸಲ್ಯ ನೋಡಿ
ನಿ ಯಾರಿಗೂ ಕಡಿಮೆ? ನಿನ್ನ ನಂಬಿದ
ಮನಕೆಲ್ಲಾ  ಹೂವು ಮಳೆ ನೀ ಸುರಿಸುವ

ರಾಹೀಲ್ ರಾಜಾಭಕ್ಷು  ಸಿ ಎಮ್.
,ಶಿಕ್ಷಕರು
[23/05, 2:58 p.m.] A Raju: ೬ ನೇ ವಾರದ ಕಾವ್ಯಸ್ಪಂದನ ಕವನ ಸ್ಪರ್ಧೆಗಾಗಿ ಈ ನನ್ನ ಕವನ..

          
      *    ಗೆಳತನ  *

ಸಾವಿರಾರು ವರ್ಷ ಕಳೆದರೂ ಸಾಯಲಾರದು
ಸಾವು ಬಂದರು ಅಳಕದಿ ಮುಂದಾಗುವುದು
ಜೀವದ ಉಸಿರಿಗೆ ಉಸಿರಾಗುವುದು
ತಂದೆ ತಾಯಿರಂತೆ ಆಶ್ರಯಾಗುವುದು

ಕಷ್ಟ ಸುಖಕ್ಕೆ ಸದಾ ಬೆಂಗಾವಲು
ಭಾವನೆಗಳ ಹಂಚಿಕೆಯ ಬಾಗಿಲು
ಕೈ ಹಿಡಿದು ನಡೆಸುವ ದಯಾಳು
ಕೈಗೆ ಕೈ ಜೋಡಿಸುವ ಅಪರೂಪದ ನವಿಲು

ಸಿರಿತನ ಒಡೆತನದಿ ದೊಡ್ದ ಸಂಬಂದ ಗೆಳೆತನ  ಮೇಲು ಕೀಳು ಇಲ್ಲ  ಇದಕೆ  ಕೊನೆತನ
ಕಣ್ಣಿಗೆ ಕಾವಲಿನ  ರೆಪ್ಪೆಯು ಪ್ರತಿದಿನ
ಸ್ನೇಹ ಸಂಬಂದಕ್ಕೆ ನಂಬಿಕೆಯೆ  ಅನುದಿನ

ನನ್ನ ಬಾಳಿನ ಪುಟಗಳಲ್ಲಿ ಬೆಸೆದ ಬಂಧನ
ನಾ ಮರೆಯಲಾರೆ ಜೀವದ ಸಂಬಂಧನ
ನೋವಿನ ಕ್ಷಣಗಳ ಮರೆಸಿತು ಆ ಚಂದನ
ಸಾವು ಬಂದರು ಸಾಹಿಸಲಾರೆನು ಈ       ಅನುಬಂಧನ


ರಾತ್ರಿ ಚಂದ್ರನ ಆಸರೆ
ಸಸ್ಯಗಳಿಗೆ ಬೆಳಕಿನ ಆಸರೆ
ಮಕ್ಕಳಿಗೆ ಅಮ್ಮನ ಆಸರೆ
ಎನ್ನ ಮನ ಜೀವಕೆ ಸ್ನೇಹಬಂಧ ಆಸರೆ..

ರಾಹೀಲ್ ರಾಜಾಭಕ್ಷು 
ಶಿಕ್ಷಕರು ಸ.ಹಿ.ಪ್ರಾ ಶಾಲೆ ಕಾಲ್ವೇಕಲ್ಲಾಪುರ
ತಾ.ಹಾನಾಗಲ್
[23/05, 2:58 p.m.] A Raju: ಅತಂತ್ರ

ಬಿರಿಸಿನಿಂದ ಭರವಸೆಯ ಹೆಸರಿನಲ್ಲಿ ಪ್ರಚಾರ
ನಾಡಿನ ಜನರು ಕಲಿಸಿದರೂ ಪಾಠ
ದಿಕ್ಕು ದಿಕ್ಕಿನಲ್ಲಿ ಹದ್ದಿನ ಕಣ್ಣಿನ ಕಾವಲು..
ಜನರನ್ನು ಕಾಯುವ ನಾಯಕರ ಕಾವಲು..

ಸಂಘ ಸಂಸ್ಥೆಗಳ ಸಂಘಟನೆ ನೋಡದವರು.
ಸಮಸ್ಯೆಗಳ ಆಳದಿ ಮುಳಗಿದಾಗ ತಯಾರಾಗುವರು....
ಜನರ ಸಂಪತ್ತಕ್ಕೆ ಕೈ ಹಾಕಿದರೆ ಸುಡುಗಾಡು
ಖಚಿತ..
ಜನರೇ ದೇವರು ಅವರ ಕಾಯಕವೇ ನಿಜ ಸೇವೆ..

ಜನರ ಸೇವೆಯೇ ಜನಾರ್ಧನ  ಸೇವೆ
ನಂಬಿದರು ಅಂದಿನ ನಾಯಕರು..
ದೇಶಾಭಿನಕ್ಕೆ ತಲೆಬಾಗಿ ಕಟ್ಟಿದ್ದರು ನಾಡನ
ಜಾತಿ ಎನ್ನದೆ ವ್ಯಕ್ತಿ ಬೆಳಿಸಿದ ಧೀರರು..

ನಾಯಕ ಪ್ರಜೆಯ ರಕ್ಷಕ 
ನಾಡಿನ ಅಯೋಜಕ
ಹಿತ ಮಿತ ಕಾಪಾಡುವ ಜನಕ
ಸದಾ ದೇವರ ಪ್ರಜೆಗಳ  ಸೇವಕ....

ನೆನಪಿರಲಿ ಒಂದೊಂದು ಮತ ಶ್ರೇಷ್ಠ
ದಿಕ್ಕರಿಸಿ ನಡೆದರೆ ಪರಲೋಕದ ಪಯಣ
ಲೋಕದಿ ಸಾವಿರಾರು ಬಾರೆ ಸೆಣಸಾಟು
ಗಲ್ಲಿ ಗಲ್ಲಿಗೂ ಕಾಯುವ ಶ್ವಾನಗಳು..

ರಾಹೀಲ್ ರಾಜಾಭಕ್ಷು ಸಿ ಎಮ್
[23/05, 2:59 p.m.] A Raju: ಕವನ ಬಿಂದುವಿನಲ್ಲಿ ಸೇರಿಸಲು

       @ ಮನಸು @

    ಓ ಮನಸೆ...ಓ ನನ್ನ ಮನಸೆ

ಏಕೆ ದೂರ ಹೋಗುವೆ  ಕಾಣದ ಲೋಕಕೆ
ಬೆನ್ನು ಹತ್ತಿ ನಾ ಬಂದೆ ಕಾಣಲಿಲ್ಲ ಮುಖಕೆ
ಸಾಗುತ್ತಾ ಸಾಗುತ್ತಾ ದಣಿದೆ ನಿನ್ನ ಜಾಗಕೆ
ಜಾಗ ಹುಡುಕಿದರೂ ಬಿಳಲಿಲ್ಲ ನೀ ನೋಟಕೆ
ಓ ಮನಸೆ...ಓ ನನ್ನ ಮನಸೆ...


ವಿಶ್ವಾಮಿತ್ರರನ್ನು ನೀ ಸೋಲಿಸಿದೆ
 ಶಿವನ ಅರ್ದಾಂಗಿನಿ ತಲೆ ಕೆಡಸಿದೆ..    
ದೇವತೆಗಳ ದೊರೆ ಇಂದ್ರನನ್ನು ನಟಿಸಿದೆ
ರಾಕ್ಷಸರ ಸಂಹಾರಕ್ಕೆ ಮುಳುವಾದೆ.
ಓ ಮನಸೆ...ಓ ನನ್ನ ಮನಸೆ......(೧)

ಗಂಡ ಹೆಂಡರನ್ನು ಬೇರೆಬೇರೆ ಕಂಡೆ..!
ಸ್ನೇಹ ಸಂಬಂಧದಲ್ಲಿ ಬಿರುಕಾದೆ!
ಧ್ಯಾನ ,ಜ್ಞಾನ ,ಶಾಂತಿ ಕದಲಿದೆ
ನೋವಿನಲ್ಲಿ ಪ್ರೀತಿ ಹುಟ್ಟಿಸಿದೆ ...
ಓ ಮನಸೆ... ನನ್ನ ಓ ಮನಸೆ ...(೨)

ಪುಸ್ತಕ  ಪ್ರೇಮಿಗಳಿಗೆ  ನೀ ಸುದ್ದಿಯಾಗುವೆ
ಯಾರನ್ನು ಬಿಡದೆ ನೀ ಮುಂದೆಯೇ ಸಾಗುವೆ
'ಕೈಕಾಲು ಇಲ್ಲ , ವಾಹನವಿಲ್ಲ  ಭೂಲ್ಟ್' ಗಿಂತ ನೀ ಮುಂದೆ ಓಡುವೆ..
ನಿನ್ನ ನೋಡಿದವರು  ಯಾರು..? ಬ್ರಹ್ಮ ,     ವಿಷ್ಣು ,ಮಹೇಶ್ವರ, ದೇವನುದೇವತೆಗಳಿಗೆ  ಮರೆಸುವೆ
ಓ ಮನಸೆ.....ಓ ನನ್ನ ಮನಸೆ....(೩)


       ರಾಹೀಲ್ ರಾಜಾಭಕ್ಷು ಸಿ.ಎಮ್
                  ಶಿಕ್ಷಕರು
   ಸ .ಹಿ.ಪ್ರಾ.ಶಾಲೆ ಕಾಲ್ವೇಕಲ್ಲಾಪುರ 
     ತಾ.ಹಾನಗಲ್    ಜಿ.ಹಾವೇರಿ
      ವಾಸ: ತಾಜ್ ನಗರ ಹಾವೇರಿ
[23/05, 2:59 p.m.] A Raju: ಇವರೇ ನಮ್ಮ ಪೂಜ್ಯರು

     ದೇಶದ ಹಿತ  ಕಾಪಾಡಿದರು ನಮ್ಮ‌ ವೀರರು
ಸ್ವತಂತ್ರ ಕ್ಕಾಗಿ ಪ್ರಾಣ ಪಣಕ್ಕಿಟ್ಟವರು
ದೇಶ ಸೇವೆಗೆ ತನವ ಅರ್ಪಿಸಿದವರು
ಸದಾ ಜಗಕೆ ಇವರು ಅಮರರು
ಇವರೆ  ನಮ್ಮ ಪೂಜ್ಯರು

ಬೇದ ಭಾವ ತಾಳದೆ  ಭಾವೈಕ್ಯತೆ ಬಿತ್ತಿದವರು
ವೈರಿಗಳಿಗೆ ಸಿಂಹ ಸ್ವಪ್ನ ರಾದವರು
ಬೆದರದೆ ಬೆಂದದೆ ಕಲಿಗಳಾಗಿ ಮೆರೆದವರು
ರಕ್ತದ ಅರಿವೆ ಇಲ್ಲದೆ ಹೋರಾಡಿದರು
ಇವರೆ  ನಮ್ಮ ಪೂಜ್ಯರು

ಸಮೃದ್ದಿ ದೇಶವ ಕಂಡ ಆ ಗಾಮ
ನೆಲೆಯೂರಿ ಕರೆ ತಂದ ಯೂರೋಪಿನರ್
ಭರವಸೆಯ ನಾಡ ಭಾರತ ಕರುಣೆ ತೋರಿತು
ಒಡಕಿನ ಬೀಜವ ಬಿತ್ತಿ  ರೋಷದ ಸಸಿಗಳ ನೆಟ್ಟಿದರು
ದೇಶವ ಕಾಯುವ ಹಠದಿ ಸುರಿಸಿದ ನೆತ್ತರ ಭಾರತೀಯ..
ಇವರೇ  ನಮ್ಮ ಪೂಜ್ಯರು


ಕನ್ನಡ ನಾಡಿನ ವೀರಾದಿ ಮೈಲಾರ ಮಹದೇವ
ಪ್ರೀತಿ ನಾಡಿನ ಸರದಾರದ ಸಹದೇವ
ಹಾವೇರಿ ಹೆಮ್ಮೆಯ ಪುತ್ರ  ರಾಷ್ಟ್ರ ನೇತಾರ
ಗಾಂದಿಯರೂಡನೆ ಜೊತೆಯಾಗಿ ಹೋರಾಟದಿ ಮುನುಗ್ಗಿದ ಸತ್ಯಾಗ್ರಹಿ
ಇವರೇ ನಮ್ಮ ಪೂಜ್ಯರು

ಕಾಣದ ದೇವರ ಪೂಜಿಸಿ ಆರಾದಿಸುವರು ಮನುಜರು
ಪೂಜಿಸುವ ದೇವರ ಕಾಣಿಸಿದರು ಮೈಲಾರ ಧೀನಬಂದರು
ಶಿವ ಶರಣರ ನಿಷ್ಠೆ ಕಾಪಾಡಿದ ರಾಷ್ಟ್ರ ಪಿತಾಮಹರು
ಇವರೇ ನಮ್ಮ ಪೂಜ್ಯರು

ಅಹಿಂಸಾತ್ಮಕ ಮಾರ್ಗದಿ ನಡೆದು 
ಗಾಂದಿ ಕನಸಿನ ತತ್ವ ಪಾಲಿಸಿ 
ಸಾವಿನ ಮಡುವಿನಲ್ಲಿ ಪಾಲಿಸಿದ ಅಹಿಂಸಾ ಆದರ್ಶಗಳು
ಅಹಿಂಸ ಹುಲಿ  ಈ ನಾಡಿನ ಸುತ 
ಒಡನಾಡಿ ಧೀರ ನಮ್ಮೆಲ್ಲರ ನಿಜ ದೇವರು
ಇವರೇ ನಮ್ಮ ಪೂಜ್ಯರು


ರಾಹೀಲ್ ರಾಜಾಭಕ್ಷು ಸಿ ಎಮ್
   ಶಿಕ್ಷಕ ಸಾಹಿತಿ 
ಸ.ಹಿ.ಪ್ರಾ ಶಾಲೆ ಕಾಲ್ವೇಕಲ್ಲಾಪುರ
ತಾ.ಹಾನಗಲ್ ಜಿ.ಹಾವೇರಿ
ವಾಸ: ತಾಜ್ ನಗರ ಹಾವೇರಿ
[23/05, 2:59 p.m.] A Raju: ಕಾವ್ಯ ಸ್ಪಂದನ ಸ್ಪರ್ಧೆಗಾಗಿ

          ಮನದ ಧ್ವನಿ

ಸುಖದ ನೆಲೆಯ ಬೆನ್ನು ಹತ್ತಿ ಕನಸ ಕಂಡೆ
ಭಾವನೆಗಳ ಆಸೆ ನೋಡಲು ಹಾತೊರದೆ
ನನಸಿನ ಜೀವಾಳ ಮುಪ್ಪಾಗಿ ಮನ ಮೌನವಾತೆ......
ಸಾಗಿ ಸಾಗಿ ದಣಿದೆ ಲೋಕದ ದಾರಿ ಹುಡುಕಿದೆ.....
ಓ ಮನ ಮೌನವಾದೆಯಾ ಏಕೆ?..

 ಹತ್ತಾರು ಬಾರೆ ಕಣ್ಣಿಗೆ ತೇಲ ಬಿಟ್ಟು ಕಷ್ಟಪಟ್ಟೆ
 ಬೇಕಾದ ಹೊತ್ತಿಗೆ ಜೋಡಿಸಿ ಮನನ ಮಾಡಿ
 ವರ್ಷಗಟ್ಟೆಲ್ಲೆ ನನ್ನ ಕನಸಿನ ಹುದ್ದೆಗೆ..... ಶ್ರಮಪಟ್ಟೆ....
ಕೈಗೆ ನಿಲುಕುವ ಮುನ್ನ ಲಕ್ಷ್ಮೀ ಮುಳ್ಳಾದಳು.
ಓ ಮನ ಮೌನವಾದೆಯಾ ಏಕೆ?..

ಧ್ವನಿಯ ಮಾತು ಕೇಳಿ ಎನ್ನ  ನಿಂತಿತು...
ಗೆಳೆಯರ ಸಂಬಂಧದ ಧ್ವನಿ ಧೈರ್ಯ ..
ಜ್ಞಾನದ ಬೆಳಕಿನ ಕಿರಣದ ಹೊನಲು ಮಕ್ಕಳಲ್ಲಿ ಹರಿಸಿ..
ಮನದ ಆಸೆ ಮಕ್ಕಳ ಜ್ಞಾನಕ್ಕೆ ಸೋತಿತು..
ಓ ಮನ ಮೌನವಾದೆಯಾ ಏಕೆ?..

ಲಂಚದ ಹೊಳೆ‌ ಮುಳುಗುವ ಗುಂಡಿ ಆಯಿತು..
ದೇವ ಕೊಟ್ಟ ಕಾಯಕ ಕೈಲಾಸ ಆಯಿತು.
ಶ್ರಮದ ಹೊಳೆ‌ ಮಕ್ಕಳಿಗೆ ಅರ್ಪಿಸಲಾಯಿತು.
ಅಧಿಕಾರಿಗಳ ನೋಡಿದಾಗ ಎನ್ನ ಮಾತು ಮೌನವಾಯಿತು..
ಓ ಮನ ಮೌನವಾದೆಯಾ ಏಕೆ?....

ರಾಹೀಲ್ ರಾಜಾಭಕ್ಷು ಸಿ ಎಮ್
           ಶಿಕ್ಷಕ ಸಾಹಿತಿ
[23/05, 3:00 p.m.] A Raju: ನವ ದಾಂಪತ್ಯ ಜೀವನಕ್ಕೆ ನವ್ಯಗೀತೆ


ಈ ಶುಭ ದಿನದಿ ಹಾರೈಸುವೆ.....
ನಮ್ಮ‌ ಪ್ರೀತಿ ನವ ವಧುವರರೆ..!ಪಲ್ಲವಿ!
ಬಾಳು ಬಂಗಾರವಾಗಿಯೇ ಇರಲಿ
ನಿಮ್ಮ ಪಯಣ ಸುಖವಾಗಿ ಸಾಗಲಿ.....
ನೀವು ಕಟ್ಟಿದ ಆ ಕನಸುವು 
ನನಸಾಗಿ ಹಾಯಾಗಿ ಹಾಡಲಿ.....


ಗೋವಾ ರಾಜ್ಯದಲ್ಲಿ ಸೃಜನಶೀಲ ಬಳಗ
ಕಟ್ಟಿದವರು... ಹಾವೇರಿ ಕುವರ
ದಾಂಪತ್ಯ ಜೀವನಕೆ ಅನುಭವ ಸಾಲದು
ಅರೆತು ನಡೆದಾಗ ಅದುವೇ ಸ್ವರ್ಗ ವು

ಅಡೆತಡೆ ಎಲ್ಲಾ ಸಹಜ  ಅಲ್ಲವೆ
ತಾಳ್ಮೆ ಸಹನೆ ನಂಬಿಕೆಯ ಸೂತ್ರ
ಹೆತ್ತ ತಾಯಿ ಹೊತ್ತ ಈ ತಾಯಿ 
ಎಂದೆಂದೂ ಮರೆಯದೆ ಸಾಗಲಿ    ‌‌‌‌‌ 
ನಿಮ್ಮ ಜೀವನ....


ದಾಂಪತ್ಯ ಎನ್ನುವುದು ಸ್ವರ್ಗದ ನಿಶ್ಚಿಯ
ಮರೆತು ನಡೆದರೆ ಸಿಗುವುದು ನರಕವು
ಪುಟಾಣಿ ಮಕ್ಕಳು ಮನೆ ತುಂಬಾ ಇರಲಿ
ಮಕ್ಕಳಲ್ಲಿ ಪ್ರೀತಿ ಸದಾ ಉಳಿಯಲಿ















..
[23/05, 3:00 p.m.] A Raju: ಅಧಿಕಾರ

ಅಸಾಮಾನ್ಯರ ತಲೆ ಕೆಡಸಿ ಹೆಸರು ಮಾಡುವರು
ಕೆಲಸಕ್ಕೆ ಜಾತಿ ಹೆಸರು ಹೇಳಿ ಅಧಿಕಾರ ಮಾಡುವರು
ಧರ್ಮದ ಹೆಸರಿನಲ್ಲಿ  ಧರ್ಮದ ಮಾರಿಕೊಳ್ಳುವರು.
ಹೇಳಿ ಜಾತಿಯ ವ್ಯವಸ್ಥೆ ಬೇಕೆ ..ಮನುಜರೆ..


ಲಂಚದ ಹೊಳೆ ಹರಿಸಿ ಸಿಂಹಾಸನ ಏರುವರು
ಜಾತಿ ಜಾತಿ ಎನ್ನುತ್ತಾ ಕೊನೆಗೆ ಆಸ್ತಿ ಮಾಡುವರು...
ಆಸೆಗಳಿಗೆ ನೂರಾರು ಬಯಕೆ ತೋರಿಸಿ ಭಯೋತ್ಪಾನೆ ಮಾಡುವರು..
ನಾಡಿನ ಸಂಪತ್ತು ಲೂಟಿ ಮಾಡಿ.... ಶ್ರೀಮಂತರಾಗುವರು...
ಹೇಳಿ ಜಾತಿಯ ವ್ಯವಸ್ಥೆ ಬೇಕೆ ..ಮನುಜರೆ..

ದೇವಾಲಯಗಳ ಘಂಟೆ ಭಾರಿಸಿ ದ್ರೋಹ ಮಾಡುವರು..
ಮಂದಿರ ಮಸೀದಿ ಕಟ್ಟಿಸಿ ಮರುಳು ಮಾಡುವರು.
ಜಾತಿಯೇ ಸಂಘಗಳ ಕಟ್ಟಿ ಮಂತ್ರಿ ಆಗುವರು
ಹೇಳಿ ಜಾತಿಯ ವ್ಯವಸ್ಥೆ ಬೇಕೆ ..ಮನುಜರೆ..

ಜಾತಿಯ ಒಳಗೆ ಜಗಳ ಹಚ್ಚಿ ನಾಟಕ ನೋಡುವರು‌‌..
ದೇಶದ ಮೂಲೆ ಮೂಲೆಯಲ್ಲಿ ಜಾತಿ ಹುಟ್ಟಿಸುವರು..
ದೇಶನೇ ಜಾತಿಯಲ್ಲಿ ಮುಳಗಿಸುವರು..
ಹೇಳಿ ಜಾತಿಯ ವ್ಯವಸ್ಥೆ ಬೇಕೆ ..ಮನುಜರೆ..

ರಾಹೀಲ್ ರಾಜಾಭಕ್ಷು ಸಿ ಎಮ್


ಪುಸ್ತಕ ಜ್ಞಾನದ ಹಸಿವು ನೀಗಿಸುವ ಆಹಾರ.          ಪುಸ್ತಕ ಅನುಭವ ಊಣಬಡಿಸುವ ಮಾಪಕ                    
ಪುಸ್ತಕ ಅರಿವಿನ ಗುರು ಕಲಿಕೆಯ ದಾರಿದೀಪ
               
 ರಾಹೀಲ್ ರಾಜಾಭಕ್ಷು ಸಿ ಎಮ್
[23/05, 3:00 p.m.] A Raju: ಮಾಯವಾಗಿ ಮರೆಯಾದೆಯೆ ಮೋಡಲಿ
ಎನ್ನ ನೋವುಗಳ ಕದಲುವಿಕೆ ಹೇಳುವಲಿ
ತಂಪಾದ  ತಂಗಾಳಿಯಲಿ ನಿನ್ನ ಆ ನೋಟ
ಎನ್ನ  ಮನದ ತಳಮಳದ ಬರಿ ನೋಟ



ಸೃಷ್ಟಿ ಯ ನೆಪದಲ್ಲಿ ಹೀನ ಕೃತ್ಯಗಳು
 ನಡೆಯುತ್ತವೆ.
ಭವಿಷ್ಯದ ಹಾದಿಯಲ್ಲಿ ಸದ್ಗುಣದ ಅಂಶಕ್ಕೆ ಮಾತ್ರ ಈ ಜಗದಲ್ಲಿ ಸ್ಥಾನ..
ಸದಾ ಒಳ್ಳೆಯ ರೀತಿ ನೀತಿಗಳನ್ನು ಕಲಿತು ಸಾಗಲಿ‌ ರಥದ ಪಥ.

ರಾಹೀಲ್ ರಾಜಾಭಕ್ಷ


     ಶಾಯರಿ

ಆಹಾ! ಆಹಾ! ಎಷ್ಟು  ಮನಮೋಹಕ ಸೊಗಸು.
ಮುಟ್ಟಲೆಂದು ಕಣ್ಣ ವರಿಸಿದೆ ಓ ..ಓ..ಕನಸು


ಜಾಣೆ ನಿನ್ನ ಮೈಮೇಲೆಲ್ಲಾ ಬಂಗಾರ
ಹತ್ತಿರ ಬಂದು ನೋಡಿದರೆ ಬರಿ ಸಿಂಗಾರ


ಬಯಸಿದೆ ಭಾರತ ಕಾಪಾಡಲು ಹೋದೆ
ಬಾಯಾರಿ ಬೆಂದು ವಿವಾದಗಳ ನಡುವೆ ಹಿಂದೂರಗಿದೆ.

ಶಾಯರಿ

ಆಹಾ! ಆಹಾ! ಎಷ್ಟು  ಮನಮೋಹಕ ಸೊಗಸು.
ಮುಟ್ಟಲೆಂದು ಕಣ್ಣ ವರಿಸಿದೆ ಓ ..ಓ..ಕನಸು


ಜಾಣೆ ನಿನ್ನ ಮೈಮೇಲೆಲ್ಲಾ ಬಂಗಾರ
ಹತ್ತಿರ ಬಂದು ನೋಡಿದರೆ ಬರಿ ಸಿಂಗಾರ

 ಕಲ್ಪನೆ ಕಂಡು ನೊಂದು ನಿಂತೆ
ಸುಮ್ಮನಿದ್ದು ಬೇರೆ ತರಹ ಮಾಡವಲ್ಲೆ ಕಂತೆ


          ಶಾಯರಿ


ಆಸೆಯ ಬುತ್ತಿ ಹೊತ್ತು ತಂದೆ ಕಣ್ಣಲ್ಲಿ
ನಿರಾಸೆಯಾಗಿ ಮನಕಲಕಿ ಮರೆಯಾದೆ ಮಣ್ಣಲ್ಲಿ...

ನಿನ್ನ ಸನಿಹ ಬಂದಾಗ ಅದೇ ನೆನಪು
ಏಳು ಏದ್ದೇಳು! ಸತ್ಯ ಬಿಚ್ಚಿನೀಡು ಹೊಳಪು

ರಾಹೀಲ್ ರಾಜಾಭಕ್ಷು
[23/05, 3:01 p.m.] A Raju: ಗುರು
ಆತ್ಮ  ಜ್ಞಾನದ ಜ್ಯೋತಿ ಬಿತ್ತಿಸಿ
ನವಯುಗವ ದೀಪಕ್ಕೆ ಬೆಳಕಿನ ನೋಟ
ಸಾಮಾಜಿಕ ಮೌಲ್ಯ ಗಳ ತುಂಬಿ..
ಭೂವಿಯ ಕಾರ್ಯದ ನೇತಾರ

ಸ್ವಾಭಿಮಾನದ ಸುಖವ ಕಲಿಸಿ
ಆತ್ಮಾಭಿಮಾನ ರೂಡಿಸಿ ಅನ್ವಸಿ
ಹೃದಯದ ವಾಣಿ ನೀಡಿಸಿ
ಹೃದಯವಂತಿಕೆ ಬೆಳಿಸಿ ನಡಿಸಿ

ಗೌರವದ ಹಾದಿಗೆ ಬಾಗಿಲು ನೀನು
ಸಮಾಜದ ಕಟ್ಟಳೆಗಳ ಮೌಡ್ಯ ಅಳಿಸಿದ ನೀನು
ಲೋಕದ ಹಿತ ಪರರ ಜೀವಕ್ಕೆ ಕಾಣಿಕೆ ಗು
ಅಜ್ಞಾನ ಸುಜ್ಞಾನ ಮಾಡಿ ಕಹಳೆ ಊದಿದೆ ನೀನು

ಬೇಕು ಬೇಡಗಳ ತಿಳಿಸಿ ಹಾರೈಸಿ
ಜಗದ ಕಲ್ಯಾಣದ ಕಣ್ಮಣಿ
ಅಮ್ಮದಿಂದ ಅಂತ್ಯದ ಅಕ್ಷರ ಅರಿವಿನ ಗುರು
ಓ ಓ ಓ ಓ ನನ್ನ ಗುರು ದೇವ ಶರಣು


ತಾಯಿ ತಂದೆ ಈಶ್ವರರ ಸ್ಮರಿಸಿದಾತ
ಭೂಲೋಕದ ‍ಚಿರಋಣ ಬಂಧಗಳ 
ಪರಿಚಯಿಸಿದ ನಾಮಾಂಕಿತ
ನಿನ್ನ ಅಮೃತ ಊಟವೇ ಎನ್ನ ಬೋಜನ

ರಾಹೀಲ್ ರಾಜಾಭಕ್ಷು ಸಿ ಎಮ್
[23/05, 3:01 p.m.] A Raju: ಅವಳು ನನ್ನ ಕಣ್ಣು

 ಜೀವ ಉಸಿರಿನ‌ ನನ್ನಾಕೆ
ತಿದ್ದಿ ಕೈ ಹಿಡಿದು ನಡೆಸಿದಾಕೆ
ಆಸರೆಯಾಗಿ ನನಗೆ ನೆರಳಾಕೆ
ತುತ್ತು ತಿನ್ನಿಸಿ ತೂಗಿದಾಕೆ
ಎನ್ನ ಮಾತಿನ ನುಡಿ ನನ್ನವ್ವ

ಊರಿನ ಮಂದಿ ಕೂಡ ಜಗಳನಾಡಿದಗ
ನನಗೆ ನೀತಿಕಥೆ ಉಣ್ಣುಬಡಿಸಿದೆ
ಶಾಂತಿಯ ಮಂತ್ರ ನಿನ್ನ ಸೂತ್ರ
ಸದ್ಗುಣಗಳ ಆಗರ ನೀ ನನ್ನಮ್ಮ

ಶಾಲೆಗೆ ದಿನ ನಿ ಕರೆತರಲು
ನಾ ಹ್ಯಾಂಗ ಮರೆಯಿಲಿ ಆ ದಿನಗಳ
ಕೂಲಿ ಮಾಡಿ ಶಾಲೆ ಜ್ಞಾನ ಕೂಡಿಸಿದೆ
ಸಮಾಜದಲ್ಲಿ ನನಗೆ ಸ್ಥಾನ ನೀಡಿದೆ..

ದೇಶದ ಕಥೆ ಹೇಳಿ ದೇಶಾಭಿಮಾನ ಬೆಳಿಸಿದೆ
ನೀತಿಯ ಕಥೆಯ ಹೇಳಿ ನೀತಿವಂತನ ಮಾಡಿದೆ.
ಗೌರವ ಕಾಣುವ ಹುದ್ದೆಗೆ ಕಾರಣಳಾದೆ
ನಿನ್ನಾ ಋಣ ಏಳೇಳ ಜನ್ಮಕೂ ಮರೆಯದಂಗ ಮಾಡಿದೆ...


ತೂಸು ನೋವಾದರೂ ಸಹಿಸದ ಕರುಣೆ
ಪ್ರೀತಿಯ ಮಮತೆಯ ಕರುಣಾಮಯೆ
ನಿನ್ನ  ಕೈಯಲ್ಲಿ ಬೆಳದನಾ 
ಸೆರೆಯಾದೆ ಅನ್ಯರ ಪ್ರೀತಿ ಕಂಕಳದಲ್ಲಿ

ನಿನ್ನ ಸ್ಥಾನ ತುಂಬಲು ಸಾದ್ಯಾನ ?
 ನನ್ನವ್ವ‌....
ನಿನಗಾದ ಅನುಭವ ಸಿಗಲಾರದು 
ನಿ ಏಕೆ ಬಿಟ್ಟು ಕೊಟ್ಟೆ ನಾ ಬೇಸರವಾದೇನು.

ಜಗವೆಲ್ಲ ಬೆಳಗುವ ಸೂರ್ಯ ತಲೆಬಾಗುವ
ನಿನ್ನ ಕಾರ್ಯ ನೋಡಿ
ಶಿವನು ನಮಸ್ಕರಿಸುವ....
ನಿನ್ನಾ  ವಾತ್ಸಲ್ಯ ನೋಡಿ
ನಿ ಯಾರಿಗೂ ಕಡಿಮೆ? ನಿನ್ನ ನಂಬಿದ
ಮನಕೆಲ್ಲಾ  ಹೂವು ಮಳೆ ನೀ ಸುರಿಸುವ

ರಾಹೀಲ್ ರಾಜಾಭಕ್ಷು  ಸಿ ಎಮ್.
,ಶಿಕ್ಷಕರು
[23/05, 3:02 p.m.] A Raju: ೬ ನೇ ವಾರದ ಕಾವ್ಯಸ್ಪಂದನ ಕವನ ಸ್ಪರ್ಧೆಗಾಗಿ ಈ ನನ್ನ ಕವನ..

          
      *    ಗೆಳತನ  *

ಸಾವಿರಾರು ವರ್ಷ ಕಳೆದರೂ ಸಾಯಲಾರದು
ಸಾವು ಬಂದರು ಅಳಕದಿ ಮುಂದಾಗುವುದು
ಜೀವದ ಉಸಿರಿಗೆ ಉಸಿರಾಗುವುದು
ತಂದೆ ತಾಯಿರಂತೆ ಆಶ್ರಯಾಗುವುದು

ಕಷ್ಟ ಸುಖಕ್ಕೆ ಸದಾ ಬೆಂಗಾವಲು
ಭಾವನೆಗಳ ಹಂಚಿಕೆಯ ಬಾಗಿಲು
ಕೈ ಹಿಡಿದು ನಡೆಸುವ ದಯಾಳು
ಕೈಗೆ ಕೈ ಜೋಡಿಸುವ ಅಪರೂಪದ ನವಿಲು

ಸಿರಿತನ ಒಡೆತನದಿ ದೊಡ್ದ ಸಂಬಂದ ಗೆಳೆತನ  ಮೇಲು ಕೀಳು ಇಲ್ಲ  ಇದಕೆ  ಕೊನೆತನ
ಕಣ್ಣಿಗೆ ಕಾವಲಿನ  ರೆಪ್ಪೆಯು ಪ್ರತಿದಿನ
ಸ್ನೇಹ ಸಂಬಂದಕ್ಕೆ ನಂಬಿಕೆಯೆ  ಅನುದಿನ

ನನ್ನ ಬಾಳಿನ ಪುಟಗಳಲ್ಲಿ ಬೆಸೆದ ಬಂಧನ
ನಾ ಮರೆಯಲಾರೆ ಜೀವದ ಸಂಬಂಧನ
ನೋವಿನ ಕ್ಷಣಗಳ ಮರೆಸಿತು ಆ ಚಂದನ
ಸಾವು ಬಂದರು ಸಾಹಿಸಲಾರೆನು ಈ       ಅನುಬಂಧನ


ರಾತ್ರಿ ಚಂದ್ರನ ಆಸರೆ
ಸಸ್ಯಗಳಿಗೆ ಬೆಳಕಿನ ಆಸರೆ
ಮಕ್ಕಳಿಗೆ ಅಮ್ಮನ ಆಸರೆ
ಎನ್ನ ಮನ ಜೀವಕೆ ಸ್ನೇಹಬಂಧ ಆಸರೆ..

ರಾಹೀಲ್ ರಾಜಾಭಕ್ಷು 
ಶಿಕ್ಷಕರು ಸ.ಹಿ.ಪ್ರಾ ಶಾಲೆ ಕಾಲ್ವೇಕಲ್ಲಾಪುರ
ತಾ.ಹಾನಾಗಲ್
[23/05, 3:02 p.m.] A Raju: ಜಗಜ್ಯೋತಿ ಬಸವೇಶ್ವರ

 ಜಗವನು ಬೆಳಗುವ ಜಗದ್ದೋರಕ
ಜೀವದ ಆಸೆಯ  ನಿರಾಕಾರಕ
ಲೋಕಕ್ಕೆ  ಸುಜ್ಞಾನವ  ಉಣ್ಣಬಡಸಿ
ಕಾಯಕ ಕರ್ಮದಿ ದಾರಿ ಅರಸಿ
ಭಕ್ತಿಯ ಮಂಥನ ತೋರಿಸಿದಾ....(೧)

ಬಸವ ಬಸವ ಎಂದೊಡೆ 
ಹಸಿದ ಕರವು ಕುಣಿಯವುದು
ನೀ ತತ್ವ ತಿಳಿಯೋಣ
ಜಗದ ಮೌಡ್ಯವ ಅಳಿಸೋಣ
ದಯ ಮಯ ಮಂತ್ರವ ಜಪಿಸೋಣ (೨)

ಕೂಡಲ ಸಂಗನ  ಸುತ ನೀನು
ಕಲ್ಯಾಣದ ಮಾಣಿಕ್ಯ  ನೀನು
ಕನಿಕರದ ಅಮೃತಶಿಲೆ ನೀನು
ಕರು ನಾಡಿನ ಧಾರ್ಮಿಕ ವಿದ್ಯಾಗುರು ನೀನು
ಲೋಕ ಕಲ್ಯಾಣದ ನೀತಿವಂತ ನೀನು
ಅಜ್ಞಾನ ಅಳಿಸುವ  ಆಧ್ಯಾತ್ಮಿಕ ತತ್ವಬೋಧಕ ನೀನು  ..(೩)

ಜಾತಿಯ ಅಳಿಸಿ ನೀತಿಯ ಉಳಿಸಿ
ಸರ್ವಧರ್ಮ ಸಮನ್ವಯ ತಿಳಿಸಿ
ಮನುಜ ಕುಲ  ಒಂದಾಗಿಸಿ
ಪ್ರಜೆ ಹಿತ ಕಾಪಾಡಿ ರಕ್ಷಿಸಿ
ಭೂವಿಯಲ್ಲಿ ಹೆಸರಾದ ಶಾಂತಿದಾತ....(೪)


      ರಾಹೀಲ್ ರಾಜಾಭಕ್ಷು ಸಿ ಎಮ್.
                   ಶಿಕ್ಷಕರು. ಸಾಹಿತಿ
       ೯೬೧೧೬೨೬೨೭೭
[23/05, 3:03 p.m.] A Raju: ಮತದಾನ

ಓ ನನ್ನ ಕನ್ನಡ ನಾಡಿನ ಪ್ರಜೆಗಳೆ
ನಾಡಿನ ಸಂವಿದಾನ ಪಾಲಿಸಿರಿ
ಧರ್ಮದ ಹೆಸರನ್ನು ಬಿಟ್ಟು 
ನಾಡಿನ ಹೆಸರಿಗೆ ನಾಯಕರ ಆರಿಸಿರಿ

 ಪರಕೀಯ ಬಂಗಾರದ ಆಸೆ ಏಕೆ
ನಿಮ್ಮ ಮನೆ ಒಡೆಯ ಬಂಗಾರ ಅಲ್ಲವೆ
ಹೀನ ಕೃತ್ಯಗಳ ಹಣ ಬೇಕೆ ಹೇಳು
ಆತ್ಮ ಸಂತೋಷದಿಂದ ಮತದಾನ ಮಾಡು


ಜಾತಿ ಮತ ಕೇವಲ ನಿನ್ನ ಭ್ರಮೆ
ಆರಿಸಿದಾಗ ನಿನ್ನ ಜಾತಿ ಮತ ದಿಕ್ಕಾಪಾಲ
ಸಿಂಹಾಸನದ ಸಿಂಹದ ಘರ್ಜನೆ 
ಕೇಳುವರಿಲ್ಲಾ ಹೇಳುವರಿಲ್ಲಾ 
ಪ್ರಜೆಗಳಿಗೆ ತಲೆ ಬಾಗುವರನ್ನ 
ನೀ ಆರಿಸು ನೀ  ಆರಿಸು

ಚುನಾವಣೆ ಮೇ ೧೨ ಕ್ಕೆ‌ ನೆನಪಿರಲಿ
ಮುಗಿದ ಮೇಲೆ ಕಳವಳ ಇರದಿರಲಿ
ರಾಷ್ಟ್ರ ಕಟ್ಟುವ ಕೆಲಸ ಸದಾ ನಿನ್ನದಾಗಲಿ
ಮೈ ಮರೆತು ಬಲಿಯಾಗಿ ಮಾರದಿರು

ದ್ವೇಷ ಹುಟ್ಟಿಸುವ ಅಮಾಯಕರು ಬರುವರು
ಪ್ರೀತಿ ತೋರುವ  ನಾಯಕರ ಕಾಣ
ಬೇರೆಯರ ಸಿರತನಕ್ಕೆ  ಬಂಧನ ಬೇಡ
ನಿನ್ನ ಸಿರಿತನವೇ ಮಿಗಿಲೆಂದು ಹೆಮ್ಮೆ ಪಡು

ಹೆಂಡ ಕುಡಿದು ಹೆಂಡರನ್ನು ಮರೆತು
ಹಲಗೆ ಬಾರಿಸುವ ಕೆಲಸ ಬೇಕಾ
ಪ್ರಜಾಪ್ರಭುತ್ವದ ಹಾದಿ ತಿಳಿ
ಕಾನೂನಿನ ಕಾಯದೆ ಅರಿ
ಕಡ್ಡಾಯವಾಗಿ ಮತ ಚಲಾಯಿಸಿ
ಉತ್ತಮ ಮತದಾರನಾಗು














 ನಿನ್ನ ಕೈಗೆ ಧನ ಬಂದಾಗ ಎಂದಿಗೂ 
 ಆ ಧನದ ಹಿಂದಿನ ಸಹಾಯಕ ಕೈ ಧನ ಮರಿಯಬೇಡ..ಮರೆತರೆ ಮುಂದೆ ಆ ಧನವೇ ನಿನಗೆ  ಮೂಳುವಾಗುತ್ತದೆ.

   ರಾರಾ..
[23/05, 3:03 p.m.] A Raju: ಅವ್ವ ನೀನೆ ಅಲ್ಲವೆ ದೇವರು..

ಭೂಲೋಕದಿ  ದೇವ ಮಾನವ 
ನಂಬಿಕೆ ಹುಸಿಗೊಳಿಸಿ ಕಲ್ಲಿಗೆ ನೈವೇದ್ಯ ವ
ತಿಂಗಳಾದಿ ಸಾಕಿ ಮುದ್ದಾಡಿ ಬೆಳಿಸಿದೆ
ಮಸೀದಿ ಮಂದಿರ ಏಕೆ ಕಟ್ಟಿಸಿದೆ
ಅವ್ವ  ನೀನೆ ಅಲ್ಲವೆ ದೇವರು.....!

 ಬೆರಳಚ್ಚಿನಿಂದ ಅಕ್ಷರವ ಮಸ್ತಕದಿ ಮುದ್ರಿಸಿದೆ
ಸಂಬಂಧಗಳ ನಾಮ ಉಣ್ಬಡಿಸಿದೆ
ಕೈ ಹಿಡಿದು ಕಾಲು ತಂದು ಕೊಟ್ಟೆ
ನಿನ್ನ ಕರದಿ ಪರಿಚಯ ಮಾಡಿ ಕೊಟ್ಟೆ
ಅವ್ವ ನೀನೆ ಅಲ್ಲವೆ ದೇವರು..!

ಶಿವನ ಬ್ರಹ್ಮಾಂಡದ ಕಥೆ ಹೇಳಿ
ದೇವಾನುದೇವತೆಗಳ ಕಾಣಿಸಿದೆ
ಸುರ ಅಸುರರ ನೆನಪು ಮಾಡಿಸಿದೆ
ಜ್ಞಾನ ನೀಡುವ ಗುರುವನ್ನ ಪರಿಚಯಿಸಿದೆ
ಅವ್ವ ನೀನೇ ಅಲ್ಲವೆ ದೇವರು..!

ನನ್ನ ಆಸೆಯ ಕನಸು ಹೊತ್ತು ನನಸು ಮಾಡಿದೆ..
ಎನ್ನ ಆಸರೆಗೆ  ಜೊತೆ ಸೇರಲು ಲಗ್ನಬಂದ ಕಟ್ಟಿದೆ..
ಹಗಲು ರಾತ್ರಿ ಹಕ್ಕಿಯ ಹಾಡ ಹೇಳುತಾ  ಮೊಮ್ಮಕ್ಕಳ ಮಲಗಿಸುವೆ...
ಅವ್ವ ನೀನೇ ಅಲ್ಲವೆ ದೇವರು..!

ಉಪವಾಸಯಿದ್ದ  ನೆನಪುಗಳು ಮರುಕಳಿಸುವವು ಆ ದಿನಗಳು..
ಪ್ರೀತಿ ವಾತ್ಸಲ್ಯ ಕಂಡು  ನೋವಿನ ಹಾಸಿಗೆ ಬೆನ್ನು ಹತ್ತಿದೆ..
 ಕಾಳಜಿ ಕಾಣದೆ ಬಿಸಾಡಿದೆ ನನ್ನ ಅವ್ವ
ಅವ್ವ ನೀನೇ ಅಲ್ಲವೆ ದೇವರು..!

ಭಯದ ಭಕ್ತಿ ಬೆಳೆದು ಹರಿಕೆ  ಹೊತ್ತೆ ಅಂದು
ಭಯವೇ ಇಲ್ಲದೆ ನನ್ನ ದುಡಿ ದೂರ ತಳ್ಳಿದೆ ಇಂದು
ಆಶ್ರಯ ಕೊಟ್ಟ ನೀನು ಹೊರ ದುಡಿದೆ
ತುತ್ತು ಕೊಟ್ಟ ನೀನು ಬಿಕ್ಷೆ ಬೇಡಿಸಿದೆ
ಅವ್ವ ನೀನೇ ಅಲ್ಲವೆ ದೇವರು..!

ಉಸಿರು ನಿಲ್ಲವ ಸಮಯ ನೆನಪಿಸಿ
ಅಂಗೈ  ಚಾಚಿ ಮನೆ ದೇವರ ಸ್ಮರಿಸಿ
ದಾರ ಕಟ್ಟಿ   ಆಶೀರ್ವಾದ ಮಾಡಿ
ದಿನವೀಡಿ ವೃತ  ಮಾಡಿ ಎನ್ನ ಪ್ರಜ್ಞೆಗೆ ಧ್ವನಿ ನೀಡುವ ಅವ್ವ ನೀನೆ ದೇವರು...
ಅವ್ವ ನೀನೇ ಅಲ್ಲವೆ ದೇವರು..
ಅವ್ವ ನೀನೇ ಅಲ್ಲವೆ ದೇವರು......!


ರಾಹೀಲ್ ರಾಜಾಭಕ್ಷು ಸಿ ಎಮ್
        ಶಿಕ್ಷಕರು
[23/05, 3:03 p.m.] A Raju: ಪ್ರೀತಿ ಸಿಕ್ಕಿದಾಗ

  ಕಣ್ಣ ನೋಟದ ಆ ರೆಪ್ಪೆಗಳೆ
 ಮನ ಕಲಕುವ  ಮುತ್ತುಗಳೆ......

ಸೂರ್ಯ ನೋಟದಿ ನೀ ಕರಗುವೆ
ಗುಬ್ಬಚ್ಚಿ ಹಾಗೆ ನಿನ್ನ ಬಚ್ಚಿಡುವೆ
ಮಾನಸ ಸರೋವರ ನಾಚಿತೆ ನೋಡಿ
ಎನ್ನ ಕಣ್ಣ ನೀರಲ್ಲಿ ಮುಳಗಿಸುವೆ....

ತುಟಿ ಅಂಚಿನ ನಿನ್ನ ಮುಂಗರಳು
ಬಲ್ಲೆ ನಾ ನಿನ್ನಾ.... ನಗುವು
ಭರವಸೆ ನಮ್ಮಿಬ್ಬರ ಈ ಮಿಲನ
ಎಂದೂ ಬಾಡದು ಈ ಬಂಧನ

ಕುಸುಮ ಲತೆ ಬಳಕುವು 
ನಿನ್ನ ನಡೆಯ ನಾಚಿ
ಸೌಂದರ್ಯದ ಕಾಲಿನಂಚವೆ
ನವಿಲಿನ ನಾಟ್ಯದಿ  ಸಂಚರಿಸುವೆ

ಹೇ ನನ್ನ ಪ್ರತಿ ಮಾತನಲ್ಲಿ ನಿನ್ನ ನಗೆ ಹನಿವು
ನಿನ್ನ ಭಾಷೆ ಭಾವನೆಯ ಉಸಿರಿನ ವಾಣಿವು
ಬಾರೇ‌.. ನನ್ನ ಜೀವವೇ .....
ಸದಾ  ಕಾಪಾಡುವೆ ಎದೆಗೂಡಿನಲಿ...
ಆಆ ಆಆ ಆಆ.....

ರಾಹೀಲ್ ರಾಜಾಭಕ್ಷು ಸಿ ಎಮ್
      ಶಿಕ್ಷಕರು 






ರಾಹೀಲ್ ರಾಜಾಭಕ್ಷು
[23/05, 3:04 p.m.] A Raju: ಯುಗಾದಿ

ನವ ವರುಷದ ಚೇತನ ಚಿಲುಮೆ
ಮೂಲೆ ಮೂಲೆಗಳಲ್ಲಿ ಸಂಬಂದಗಳ ಒಲುಮೆ
ಹೊಸ ಕನಸುಗಳಿಗೆ ಸುಂದರ  ಹೊದೋಟ
ಮನೆ ಮನೆಗಳಲ್ಲಿ ಸೊಗಸಾದ ಹಬ್ಬದೋಟ

 ಸಾಧನೆ ಕಲ್ಪನೆ ಹೊತ್ತ ಸಾಧಕರಿಗೆ ದಾರಿದೀಪ
ನವೀನ ಸಲಕರಣೆಗಳಿಗೆ ಹೊಂಬೆಳಕಿನ‌ದೀಪ
ಖುಷಿ ಮುಖದ ಮಂದಹಾಸ ಹಸುಳೆ ಕಂದಮ್ಮರು
ತಂಗಾಳಿಯ ತಂಪು ಸೂಸುವ ಹಸಿರು 

ಎಲ್ಲಡೆ ಚಿಗುರುವ ಎಳೆ ಹರೆಯದ ಚಿಗುರಲೆ
ಬಾನಂಗಳದಿ ಹಾರುವ ಹಕ್ಕಿಯ ಚಿಲಿಪಿಲಿ
ಹೊಸ ರಾಗ ಹೊಸ ಕವನ ಹೊಸ ಮಾತುಗಳ ಸಮಾಗಮ..
ಮರಳಿ ಮರಳಿ ಬರುತಿರಲು ಯುಗಾದಿ
ಮತ್ತೆ ಚೇತನ ಮತ್ತೆ ನವ ಯೋಜನೆ ನವ ಯೋಚನೆ ... 


ಸಮಸ್ತ ನಾಡಿನ ಜನತೆಗೆ ನವ ಯುಗಾದಿಯ ಶುಭಾಶಯಗಳು

 ರಾಹೀಲ್ ರಾಜಾಭಕ್ಷು  ಸಿ.ಎಮ್
       ಪ್ರದಾನ ಕಾರ್ಯದರ್ಶಿ
  ಸೃಜನಶೀಲ ಕನ್ನಡ ಸಾಹಿತ್ಯ ಬಳಗ 
          ಹಾವೇರಿ ಘಟಕ (ರಿ)
[23/05, 3:04 p.m.] A Raju: ದ್ವೇಷ

ಲೋಕದ ಕಣ್ಣಿಗೆ ನೀ ದೇವರು
ಮಂಕಾಯಿತೇ ನಿನ್ನ ಒಲವು
ಎನ್ನ ಬಾಳದಿ ಏಕೆ ಸೆಣಸಾಡಿದೆ..
ದ್ವೇಷದ ಬದುಕಿನ ಹನಿ ಏಕೆ ಸುರಿಸಿದೆ...

ನಿನ್ನಾ ಜೊತೆಗೆ ನಡೆದೆ ಗುತ್ತಿಗೆಯ ಜೀವನದಿ
ನಾ ಮರೆಯಲಾರೆ ಆ ದಿನಗಳ
ಜ್ಞಾನ ಭಂಡಾರದ ಬುತ್ತಿ  ತಿನ್ನಿಸಿದೆ..
ಆಸೆಯ ಕನಸು
[23/05, 3:04 p.m.] A Raju: ವಚನಗಳು
ಜ್ಞಾನವಿದ್ದ ದೇಹ ಚುತುರದಿ ಬೆಳೆಯುವ ಭೂವಿ
ಅಜ್ಞಾನವಿದ್ದ ದೇಹ ಬರುಡು ಭೂವಿ
ಇದನ್ನ ಅರಿಯೇ ನನ್ನ ಸಾಯಿನಾಥ

ಆಸೆಯೇ ರೋಗಕ್ಕೆ ಆಸರೆ
ಜಗಳವೇ ದ್ವೇಷಕ್ಕೆ ನೆರೆಹೂರೆ
ಶಾಂತಿಯೇ ನೆಮ್ಮದಿ ಗೆ ಸೂತ್ರವಯ್ಯ ಸಾಯಿನಾಥ

ಸೋತು ಮಾತಾನಾಡದೆ ಹೋಗಿ
ಸೋಲನ್ನು ಅನುಭವಿಸಿ
ಬಿಕ್ಕಿ  ಬಿಕ್ಕಿ ಅಳುತ್ತ ಕುಳಿತರೆ
ಗೆಲ್ಲಲು ಸಾದ್ಯವೇ ಸಾಯಿನಾಥ್

ನಿನ್ನ ಮನಕ್ಕೆ ಅಂಜದೆ 
ಅನ್ಯರ ಏಟಿಗೆ ಅಂಜುವನೇ
ತನ್ನ ತಾ ಅರಿಯವರೆಗೂ 
ಫಲದ ವಾಸನೆ ಕುಡಿದರೂ ಆತಾ ಮನುಜನೇ ಸಾಯಿನಾಥ್
[23/05, 3:05 p.m.] A Raju: * ಕನ್ನಡತನ *

ಕಬ್ಬಿನ ರಸದ ಸಿಹಿಯಂಗ ನನ್ನಾ ಉಸಿರು
ಅಕ್ಷಿಪಟದ ಕಣ್ಣಿನ ಹನಿಗಳಂಗ ಬೆವರು
ಕನ್ನಡ ನಾಡು ಕನ್ನಡ ಭಾಷೆ ತವರು 
ಜೈ ಕನ್ನಡ ಜೈ ಕನ್ನಡ ಎಂದು ನೀ ಸಾರು 
ಓ ನನ್ನ ಕನ್ನಡ  ಕನ್ನಡವೇ .........ಓ ನನ್ನ ಕನ್ನಡ ತನವೇ......
 ಕನ್ನಡ ಕುವರರನ್ನು ಬೆಳೆಸಿದ ಮಿಗಲು ನಾಡು
ಸ್ನೇಹ ಪ್ರೀತಿ ಸಹಬಾಳ್ವೆಗಳ  ಮೇರಿದ ಬೀಡು
ಜೀವ ಜೀವನದ ಉಸಿರಿನಾ ಹಸಿರು ಗೂಡು
ಸಹಕಾರ ಸಂಬಂಧಗಳ ಜನ್ಮ ಸಿದ್ದ  ನಾಡು
ಓ ನನ್ನ ಕನ್ನಡವೇ.........ಓ ನನ್ನ ಕನ್ನಡ ತನವೇ......


ಪಾರಂಪರಿಕ ಶಾಸ್ತ್ರೀಯ ತವರಿನ ಹೊನಲು
ಶಾಂತಿ ಧ್ಯಾನ ಆಧ್ಯಾತ್ಮಿಕ ಸಂಸ್ಕ್ರತಿಯ ಬಾಗಿಲು
ವರ್ಷದಾರೆಯ ಬದುಕಿನಾ ಭಾಷೆಯ ನೇಗಿಲು
ಹಿರಿಯರು ಬಿತ್ತಿದ ಮೊಳಕೆಯ ಕುಡಿ ಸಾಲು 
ಓ ನನ್ನ ಕನ್ನಡವೇ.......ಓ ನನ್ನ ಕನ್ನಡ ತನವೇ......

ಕನ್ನಡಕೆ ಸದಾ ಹೋರಾಡುವೆ ಓ ಕಲ್ಪತರುವೆ
ದ್ರಾವಿಡ ಭಾಷೆಯ ಜೀವದಾರೆ ಓ ಜೀವವೆ
ಕನ್ನಡ ನಾಡಿನ ಪ್ರತಿ ಜೀವಗಳ ಮನವೆ ಯ್
ನಮ್ಮ ರಕ್ತದ ಕಣ ಕಣದಲಿ ನಿ ಇರುವೆ
ಓ ನನ್ನ ಕನ್ನಡವೇ...........ಓ ನನ್ನ ಕನ್ನಡ ತನವೇ......


ಕನ್ನಡತನ ನನ್ನಾ ಹೃದಯ ಬಡಿತ ನಿತ್ಯ
ಕನ್ನಡ ಕವಿಗಳ ನುಡಿಯೇ  ಸತ್ಯ
ಕನ್ನಡ ನೆಲದಲ್ಲಿ ಕನ್ನಡ ವಾಣಿ  ಅತ್ಯಗತ್ಯ
ಕನ್ನಡಕ್ಕೆ ಹೋರಾಡಿ ಕನ್ನಡವಾ ಕಾಪಾಡುವೆ..
ಓ ನನ್ನ ಕನ್ನಡವೇ..........ಓ ನನ್ನ ಕನ್ನಡ ತನವೇ......

ರಾಹೀಲ್ ರಾಜಾಭಕ್ಷು ಸಿ .ಎಮ್
ಸಹ ಶಿಕ್ಷಕರು.
[23/05, 3:05 p.m.] A Raju: ಮೌನ

ಶಾಂತಿಯ ಪ್ರತೀಕ ನೀನಾದೆ
ಜ್ಞಾನ ದ ಸಂಕೇತ ನಿನಗಿದೆ
ಗೌರವದ ಮನೋಭಾವ ನಿನಗಿದೆ
ಆಧ್ಯಾತ್ಮಿಕದ ಚಿಂತನೆ ನಿನಗಿದೆ

ಬಂಗಾರವಾದೆ ನೀ ಆತ್ಮದೂಳಗೆ
ಫಲವಾದೆ ನೀ ಶಾಂತಿ ಮಂಥನದೂಳಗೆ 
ನೆಲೆಯೂರಿದೆ ಬುದ್ಧ  ಮಹಾವೀರ ರ ಮನಸ್ಸಿನಯೂಳಗೆ
ಬರಹವಾದೆ ರನ್ನ ಪಂಪ ಜನ್ನರ ಮಂಥನದೂಳಗೆ
[23/05, 3:06 p.m.] A Raju: ಗೆಳತಿ

ಮುಂಗಾರಿನ ಮಳೆಯಲ್ಲಿ ನೀ ಕಂಡೆ
ಕಾತೂರದಿ ಬರಲೆಂದರೆ ಆಳದ ಕಲ್ಲು ಬಂಡೆ
ದೂರದಿ ನೋಡಿ ಮನ  ತಲ್ಲಣಗೊಂಡಿತ್ತು.
ಬಂಡೆಯಿಂದ ಜಿಗಿಯಲು ಪಾದ ಅಣಿಯಾಗಿತ್ತು.

 ನಡುವೆ ಜಲ ಹರಿಯುವ ಶಬ್ದ ಝೆಂಕಾರ
 ಸೊಗಸಾದ ನಿನ್ನ ಮುಖ ಅಲ್ಲಿ ಪನ್ನೀರ
ಶಿವನ ಮೊರೆ ಹೋದೆ ಫಲಿಸಲಿಲ್ಲ
ಹನುಮನ ನೆನದೆ ದೊರಕಲಿಲ್..ಓ ಗೆಳತಿ

ಯೋಚಿಸಿ ಕುಳಿತೆ  ಅವಳ ಬಿಂಬ ನೋಡುತ
ಬಿಂಬದಲ್ಲಿ  ಆ ನಗೆ ನನ್ನ ಮನ ಸೆಳೆಯಿತ.
ಏನೂ ಅರಿಯದ ಕಣ್ಣುಗಳು ಹಾತೋರಿದವು
ಭಾವನೆಗಳು ಬೇಸೆದು  ಒಂದುಗೂಡಿದೇವು.  
ಓ ಗೆಳತಿ....

ಮನದಲ್ಲಿ ಆ ನೋಟ ನೆನದೆ
ಧೈರ್ಯದಿ ಹಾರಿ ಮುನ್ನಡೆದೆ
ಮುಂದೆ ಮುಂದೆ ಹೋಗಲು 
ಆ ಗೆಳತಿ ಶಿಲ್ಪಿಯಾಗಿ ನಿಂತಳು..
ಓ ಗೆಳತಿ ..ಜೀವದ ಸಂಗಾತಿ..
ಓ ಗೆಳತಿ.....

ರಾಹೀಲ್ ರಾಜಾಭಕ್ಷು
[23/05, 3:06 p.m.] A Raju: ನೊಂದ ಜೀವ

ಬಳಲಿ ಹೋಯಿತಾ ಮನದ ಜೀವ
ಅಳಲು ವರಿಸುವರು ಅಳಿಸಿದರು ಜೀವ
ಹೊತ್ತು ಮುಳಗಿ ಕತ್ತಲಾಯಿತು ಬೆಳಕು ಕಾದೆ
ಕಾಣದ ಲೋಕದ ಮಾತಿನಿಂದ ದೂರ ಮಾಡಿದೆ
ಓ ನನ್ನ ಜೀವ ಓ ನನ್ನ ಜೀವ

ಕನಸಿನ ನಗೆಯಲ್ಲಿ ನಾ ಬೆರೆತು ಸಾಗಿದೆ
ನನಗರಿವಿಲ್ಲದೆ  ನಗುವಿನ ಹಿಂದೆ ನಿ ಬಂದೆ
ಬೆಚ್ಚಿ ಬಿದ್ದೆ ನಾ ಆ ಕ್ಷಣ  ನಿಟ್ಟುಸಿರು ತಂದೆ
ನಗುವಿನ ಆ ನೋವಿಗೆ ನಾ ಆಹಾರವಾದೆ

ಬಿರು ಬಿಸುಲಿನಲ್ಲಿ ದಣಿದು ಬೆಂಡಾದೆ
ಜೀವಕೆ ಬಿಸಿಲಿನ ಛಾಯೆ ನೀಡಲು ನಿಂದೆ
ಅರ್ಥ ಸಿಗದೆ ಕಂಗಾಲಾದೆ
ನೆರಳಿಗೆ ನಲಿವಿಗೆ ನಿರಾಸೆಯಾದೆ
ಓ ನನ್ನ ಜೀವ ಓ ನನ್ನ ಜೀವ...

ಆತ್ಮ ಜ್ಞಾನವೂಂದೆ ನನ್ನ ಪರಮ ಗುರಿಯಗಿತ್ತು..
ಆಧ್ಯಾತ್ಮಿಕ ಜೀವನ ನನ್ನ ಉಸಿರಾಗಿತ್ತು 
ಧ್ಯಾನಂ ನೈಜ  ಸಂಯಮ ಮುಂದುವರಿದಿತ್ತು
ಹೇ..ಹೇ ಜೀವ ಬಾಳಿಗೆ ನಿನ್ನ ಅಗ್ನಿಕಿಡಿ ಹತ್ತಿ ಉರಿದಿತ್ತು....ಓ ಜೀವ ಓ ನನ್ನ ಜೀವ

ರಾಜಾಭಕ್ಷು ಸಿ ಎಮ್
[23/05, 3:06 p.m.] A Raju: ನನ್ನ ೨೦ ನೇ ಆಧುನಿಕ ವಚನ


ನುಡಿ ನೀಡಿದ ಮಾತಿಗೆ ನಡೆ ಎಲ್ಲಿ?
ನುಡಿಗೆ ನಡೆಗಳ ಸಹಾಯಕ ಅವಶ್ಯಕ
ನುಡಿಯ ಭಾವದ ವಿಚಾರಕೆ ಬೇಕು ಹಂಚಿಕೆ 
ನುಡಿವ ಗುಡಿಗೆ ಗೋಪುರ ಕಟ್ಟಿ ಕಂಬಿಗಳ
ಮರೆತು ಬಿಟ್ಟರೆ ಎಂತಹ ಮೆಚ್ಚನಾ ನಮ್ಮ ಸಾಹಿನಾಥ.....

ಲೋಕದ  ಹಣೆ ಬರಹ ನೀ ಏಕೆ ತಿದ್ದಲು ಹೋದೆ.....
ಲೋಕದಲ್ಲಿ ನಿನ್ನ ಬರಹ ಬರೆದಿದ್ದಾರೆ ನೋಡದೆ ಹೋದಿಯಾ......
ಅವರವರ ಭವಿಷ್ಯ ಅವರವರ ಖಾಲಿ ಪೇಪರ್
ನೀ ಹೇಗೆ ಬರಿಯುತ್ತೀಯೋ( ಬಾಳುತ್ತೀಯಾ) 
ಹಾಗೇಯೇ ನಡಿಯುವುದು  ಬದುಕಿನ ಮಾರ್ಗ
ಇದನ್ನುಮರೆತು ಭವಿಷ್ಯ ಹೇಳಲು ಹೊರಟರೆ
ಎಂಥಹ ಮೆಚ್ಚನ  ನಮ್ಮ ಸಾಹಿನಾಥ.....

ರಾ.ರಾ
[23/05, 3:07 p.m.] A Raju: ಹನಿಗವನ

     ಮಳೆ

ಅಂದು ಕೊಡಿಸಿದೆ ನಾ ಬಳೆ
ಮೋಡ ಸುರಿಯಿತು ಪಳಪಳ ಮಳೆ
ಮೆಲ್ಲ ಮೆಲ್ಲಗೆ  ಹೋಯಿತು ಅವಳ ಮುಖದ ಕಳೆ
ಓಡಿ ಓಡಿ ಹೋಗಿ ನೆನಪಿಸಿಕೊಂಡಿ ಅವಳ ಕೊಳೆ ಕೊಳೆ...

      ದಾಬಾ

ಸೂಟ್ ಚ್ಸಮಾ ಟ್ಯಾಕ್ಸಿಯಲ್ಲಿ 
ದಗ್ಗ ದಗ್ಗ ಅಂತ ದಾಬಾ ಕ ಹೋದೆ
ಕಣ್ಣಲ್ಲಿ ಕಣ್ಣೀಟ್ಟು ನಾ ನೋಡಿದೆ
ಸನ್ನಿ ಮಾಡಿ ಕರಿದೆ
ತುಂಬಾ ಖುಷಿಯಾಯಿತು ...
ದಾಬಾ   ಊಟ ಖಾಲಿಯಾಯಿತು..
ಬಿಲ್ಲು ಬಂತು ..... ಸೂಟ್ ಕೊಟ್ಟು...
ದಾರಿ ಹಿಡಿದು ಮನೆಗೆ ನಡೆದೆ ಹೋದೆ..


ರಾರಾ
[23/05, 3:07 p.m.] A Raju: ನೋಂದ ಜೀವ

 ಏಳೀ ಏದ್ದೇಳಿ ಏಕೆ ಮೌನ... ಸಾಗಲಿ ಹೋರಾಟ ನಡೆಯರಿ
ಅಮಾಯಕ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಡೆಯರಿ
ನಿಲ್ಲಿಸಿ ನಿಲ್ಲಿಸಿ ಇಂತಹ ಕಾಮುಕರಾಟ
ಸಾಹಿಸಿ ಸಾಹಿಸಿ ಇಂತಹ ದಾರಿದ್ರ್ಯರ ಆಟ

ನಮ್ಮ ಮಕ್ಕಳು ತಾಯಿಯ ಸ್ವರೂಪ
ಮುಂದೆ ಹೀಗೆ ಆದರೆ ಅವಳು ಲೋಕಕ್ಕೆ ಅಪರೂಪ
ಕಾನೂನುಗಳು ಎಚ್ಚೇತ್ಗೊಳ್ಳಲ್ಲಿ ಸುಟ್ಟು ಹಾಕಿರಿ ಪಾಪಿಗಳನ್ನ
ಜಗತ್ತಿನ ಇತಿಹಾಸ ಅರಿಯಲಿ ವಿಧಿಸಿರಿ ಶಿಕ್ಷೆಗಳನ್ನ

ಮನಕುಲಕ್ಕೆ ಆಧಾರವಾಗುವ ಶಿಕ್ಷಣ ಕೂಡಿಸಿರಿ
ಗಾಂದಿ ಕಂಡ ಕನಸು ನನಸು ಮಾಡಿರಿ
ಕಾಮುಕರಿಗೆ ತಕ್ಷಣ ಗಲ್ಲು ಶಿಕ್ಷೆ ನೀಡಿರಿ
ಎತ್ತಿ ಕರಗಳನ್ನು ರಾಕ್ಷಸರನ್ನು ಕೊಲ್ಲಿರಿ 

ನೋಂದ ಜೀವಕ್ಕೆ ಸಾಥ್ ನೀಡಿ
ಹಾಳು ಮಾಡದಿರಿ ಹೆಣ್ಣು ಲೋಕ
ದೇಶದಲ್ಲಿನ ರಾಕ್ಷಸರ ಕೈಗೆ ಹಾಕಿ ಬೇಡಿ
ಹೆಣ್ಣಿಗೆ ದ್ರೋಹ ಮಾಡುವರಿಗೆ ಸಿಗಲಿ ನರಕ

   ರಾರಾ
[23/05, 3:07 p.m.] A Raju: ಕೋಟೆ

ಏಳು ಸುತ್ತಿನ ಇತಿಹಾಸ ಮೆರದ ಕೋಟೆ
ಸಹಸ್ರಾರು ವರ್ಷದ ಪಾರಂಪರಿಕ ಚಿತ್ತಲ್
ಓಬವ್ವನ ಸಾಹಸದ ಹುಲಿಯ ಬೇಟೆ
ಬನ್ನಿರಿ ನಾಡಿನ ಹೆಮ್ಮ  ದುರ್ಗಾ ಸುತ್ತಲ್

 ಚಿತ್ರದುರ್ಗ ದ ಏಳು ಸುತ್ತಿನ ಕೋಟೆ
 ಸುಂದರ ಛಂಧವಳ್ಳಿ ತೋಟ 
 ಶಿವನ ರೂಪದಿ ಮುರಾಘಾರಾಜೇಂದ್ರ ಮಠ
 ಝೇಂಕರಿಸುವ ಜೋಗಿಮಟ್ಟಿ ನೋಟ

ಆಡು ಮಲೇಶ್ವರ ಹಾಲು ರಾಮೇಶ್ವರನ ಮಹಿಮೆ ಆಗರ
ನಾಯಕರ ಹಟ್ಟಿ ವಾಣಿ ವಿಲಾಸ ಸಾಗರ 
ಗವಿಗಳ ಗವಿ ರಂಗಾ ನೋಡಲು ಬಾರೋ
ದೊಡ್ಡಗಟ್ಟಿ ತುರುವನೂರ ಕೈಬೀಸಿತು ಪೋರ

ಸಾಹಸ   ವೀರ ಮದುಕರಿ ನಾಯಕ
ಆಳಿದ ಚಿತ್ರದುರ್ಗ ವ ನಾಯಕರ ನಾಯಕ
ಅರಳಿದವು ಚಲನಚಿತ್ರಗಳು ಬಾವುಕ
ಬಯಲು ಸೀಮೆಯ ಸೂಗಸಾದ ಜೀವಕ

ವೀರವನತೆ ಓನಕೆ ಓಬವ್ವ ದುರ್ಗಿಯಾದಳು
ಹೈದರಾಲಿಯ ಸೈನ್ಯ ಹಿಮಟ್ಟಿಸಿದಳು
ಮೋಸದಿ ಚುಚ್ಚಿದ ದುಷ್ಟ ಸೇನಾನಿ
ಅಮರಳಾದಳು ದುರ್ಗದ ಆ ಜನನಿ

ನದಿಯಾಗಿ ಹರಿದಳು ದುರ್ಗದ ವೇದಾವತಿ
ವಾಯುವ್ಯ ದಿಕ್ಕಿದಿ ಉದಿಸಿದಳು   ತುಂಗಭದ್ರವತಿ
ಮೂಢಣ ಸೂರ್ಯ ನಾಚಿ  ಮರೆಯಾದನು
ಹೂವಿನ ಸುಗಂಧದ ಪರಿಮಳ ಮಕರಂದನು

ಶರಣರ ಭಕ್ತಿ ಜ್ಞಾನ ಸುಧೆ ಮುರಘಾಮಠ
ನಿತ್ಯ ಹಸಿದವರಿಗೆ ಸಾಗುವುದು ಬೋಜನ
ತಪಸ್ಸಿನ  ಧ್ಯಾನದ ಲೋಕ ಕಲ್ಯಾಣ ಪಠಣ ಆತ್ಮ ಶುದ್ದಿ ಸಂಸ್ಕಾರ ಸಿಗುವ ದಿವ್ಯ ಮಹತ್ಮರ ತಾಣ

ಚಾಲುಕ್ಯ ರಾಷ್ಟ್ರಕೊಟ ಶ್ರಮಿಸಿದ ಕೋಟೆ
ತಿಮ್ಮಣ ನಾಯಕನ ಆಳ್ವಿಕೆಯ ಭದ್ರಕೋಟೆ
ದೇಶದ ಮೊದಲ  ಪ್ರವಾಸಿ ಉಕ್ಕಿನ ಕೋಟೆ
ಹೆಸರಾಯಿತು ಹಸಿರಾಯಿತು ಕನ್ನಡ ಕೋಟೆ


ರಾ ರಾ .
ರಾಹೀಲ್ ರಾಜಾಭಕ್ಷು
[23/05, 3:07 p.m.] A Raju: @   ಸಂಕ್ರಾಂತಿ ಹಬ್ಬ @

ಎಳ್ಳು ಬೆಲ್ಲ ಬಲು ರುಚಿ ಸವಿ ಸಂಕ್ರಾಂತಿ
ನೋವು ನಲಿವು  ಕೂಡಿ ಬಂದ ಸ್ಥಿತಿಗತಿ
ಸಂಬಂದಗಳು ಹಿಡಿದಿಡುವ ಜೀವಜಾತಿ

ಪ್ರೀತಿ ಮಮತೆ ಬೆಸೆಯುವ ಗೆಳೆತನ
ಒಟ್ಟಿಗೆ ಬಾಳುವ ಆನಂದದ  ಸಿರಿತನ
ಮರೆಯಲು ಸಾಧ್ಯಾನ ಕೊನೆತನ

ಎತ್ತು ಚಕ್ಕಡಿ ಗಾಲಿ ಬಂಡಿ   ಕಟ್ಟಿಕೊಂಡು  
ಚಟ್ನಿ ರೊಟ್ಟಿ ಕಾಳಿನ ಪಲ್ಯ ಹಿಡಿಕೊಂಡು
ಸ್ವಲ್ಪ ಬೇವ ಬೆಲ್ಲ ಸಿಹಿ ಕಹಿ ಬೆರತುಕೊಂಡು


ಗುಂಪು ಗುಂಪಾಗಿ ಬಿದ್ದು ಆಟದ ಮಜ್ಜನ
ಗುಂಪಿನ ಮಂದಿ ಸೇರಿ ಹೊಳೆ ಬೋಜನ 
ಗುಂಪಿನಲ್ಲಿ ಕೇ..ಕಿ ಕಿಟಲೆ ಬಲು ಸಜ್ಜನ

ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು .....   

             ರಾಹೀಲ್ ರಾಜಾಭಕ್ಷು
[23/05, 3:08 p.m.] A Raju: ದೇಶಭಕ್ತಿ ಗೀತೆ

 ದೇಶ ಓ ನನ್ನ ದೇಶ .....
ಮನ ಮನಗಳಲಿ ಮನೆಮನೆಗಳಲಿ
ಸಂಭ್ರಮ  ತಾಣವು..ನನ್ನ ದೇಶದ
ಸಂಭ್ರಮ ತಾಣವು.....

ಸಂವಿಧಾನ ನಮ್ಮ ಮೂಲಭೂತರಿ
ಮರೆಯದಿರಿ ನನ್ನ ಭಾರತೀಯರೆ
ಸಮಾನತೆ ಸ್ವಾತಂತ್ರ್ಯ ಶಿಕ್ಷಣ  
ನಮ್ಮ ಬದುಕುಗಳು...

ಕವಿಗಳಿಗೆ ಹೆಸರಾದ ನಾಡು ನಮ್ಮದು
ಕವಿಗಳಿಗೆ ಆಶ್ರಯದ ತಾಣ ನಮ್ಮದು
ಪಂಡಿತ ಪಾಮರರ ಸಿರಿನುಡಿ ನಮ್ಮದು....

ತಾನಸೇನ್ ಗಂಗೂಬಾಯಿ  ಆಶಾ ಬೋಸ್ಲೆ
ದೇಶದ ಹಿರೆಮೆಯ ಸಾರಿದರು
ಭಗತ್‌‌ ಸಿಂಗ್‌‌ ತ್ಯಾತ್ಯಾಟೋಪಿ ಮಹದೇವಪ್ಪ
ಗಾಂದಿ ತಾತಾ ಸುಭಾಷ್ ಚಂದ್ರರರು
ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು

ಸೌಂದರ್ಯ ಭರಿತ ಬೆಟ್ಟಗುಡ್ಡಗಳು
ಸೊಗಸಾದ ಪ್ರಾಣಿಪಕ್ಷಿಗಳು
ಜುಳು ಜುಳು ಹರಿಯುವ ಜಲಪಾತಗಳು
ಝೇಂಕರಿಸುವ ಸುಂದರ ಕಾಡುಗಳು..


ರಾಹೀಲ್ ರಾಜಾಭಕ್ಷು
[23/05, 3:08 p.m.] A Raju: ಅವರೆ ಅಂಬೇಡ್ಕರ್.

ಅಮರವೀರ ಅಂಬೇಡ್ಕರ್ ಸಂವಿಧಾನ ಶಿಲ್ಪಿ
ದೇಶದ ರಕ್ಷಣೆಗೆ ಹಗಲು ಇರುಳು ದುಡಿದರು
ದಲಿತರ ಉದ್ದಾರ ಇವರ ಗುರಿಯು
ಕಾನೂನು ರಚಿಸಿ ಶ್ರಮಿಸಿದರು ಸಾಧಕರು
ಅವರೆ ಅಂಬೇಡ್ಕರ್.ಅವರೆ ಅಂಬೇಡ್ಕರ್.

ದಕ್ಷತೆ ಹೆಸರೆ ನಮ್ಮ ಅಂಬೇಡ್ಕರ್
ದಿಕ್ಕು ದಿಕ್ಕುಗಳಲ್ಲಿ ಹೆಸರಾದ ಅಮರರು
ಸ್ವಾತಂತ್ರ್ಯ ಸಮಾನತೆ ಏಕತೆಯ ನೀಲುವು
ಅವರೆ ಅಂಬೇಡ್ಕರ್.ಅವರೆ ಅಂಬೇಡ್ಕರ್.

ದೇಶದ ಭವ್ಯತೆಗೆ ಹಗಲಿರುಳು ದುಡಿದರು
ಜನಸಾಮಾನ್ಯರಿಗೆ ನಿಜವಾದ ನ್ಯಾಯ ಒದುಗಿಸಿದರು
ಮೇಲು ಕೀಳು ಅಳಿಸಿ ಹಾಕಿದರು...
ಅವರೆ ಅಂಬೇಡ್ಕರ್ ಅವರೆ ಅಂಬೇಡ್ಕರ್.



ರಾಹೀಲ್ ರಾಜಾಭಕ್ಷು
[23/05, 3:08 p.m.] A Raju: * ಭಾವಗೀತೆ *

ಮನವ ತುಂಬಿ ಹಾಡುವೆ ನಾನು
ಮನಸಿನಲ್ಲಿಯ ಮಾತನು
ಹೊಡೆದು ಹೋದ ಎನ್ನ ಹೃದಯ
ಕುಡಿ  ಬಾಳುವುದೆನು........(ಪಲ್ಲವಿ)

೧)
ಕಲ್ಪನೆ ಎನ್ನ ಮೂಲವಾದೆ
ಕಾಣದ ಕೈ ಯ ನಾ ಹುಡುಕಿದೆ
ಓ ದೇವ ಏಕೆ ಮೌನ ಕಣ್ಣು ಕಾಣದೆ      ಕನಸಿನ ಈ ಲೋಕವ ನೋಡ ಬಾರದೆ (ಪ..)

೨) 
 ಭರವಸೆಯ ನೆಲದ ಮೇಲೆ ನಾ ನಡದೆ
ಅದಕೆ ಮುಳ್ಳಿನಿಂದ ನೆತ್ತರ ಸುರಿಸಿದೆ
ಕಾಲ ಭೈರವಿಯ ಕಾಲ ತಿಳಿಯದೆ
ಅನ್ಯರ ಮಾತಿಗೆ ಬೆಲೆ ನೀಡಿದೆ..(ಪ..)

೩)
ನದಿಯ ಆಳದಿ ಪ್ರತಿಬಿಂಬ ಕಂಡನೆ
ಬಿಂಬ ನೋಡಿ ಓಡಿ ಬಂದನೆ
ಸಾವಿನಲ್ಲಿ ನಿನ್ನ ನೋಟನೆ
ಹೇಗೆ ಬದುಕಲಿ ಹೇಳುನಿ..(ಪ..)

೪)
ದೈವದ ಹಣೆಬರಹ ಬರದೆ ನೀನು
ಬರೆಯಲು ಅನುಮತಿ ಕೇಳಿದೇನೂ..?
ಹಕ್ಕಿ ಹಕ್ಕಿ ರೆಕ್ಕೆಗಳ ಕುಡಿಸಿ ಹಾರಿಸಿದೇನು ಪ್ರೀತಿ ನೆನಪುಗಳ ಮನದಲ್ಲಿ ಇರಿಸಿದೇನು..


ರಾಹೀಲ್ ರಾಜಾಭಕ್ಷು.
[23/05, 3:08 p.m.] A Raju: @  ಅನಕ್ಷರಸ್ಥ @
  
        ಓ ಓ.  ಓ.  ಓ. ಓ ಓ
ಕಲಿಯರಣ್ಣ  ಅಕ್ಷರವ ....
ನುಡಿಯರಣ್ಣ ಸಾಕ್ಷರವ...
ದೇಶದ ಏಕತೆಗೆsss ದುಡಿಯೋಣ ನಾವೆಲ್ಲಾ
ದೇಶವ ಸಾಕ್ಷರತೆ ssಮಾಡೋಣ ನಾವೆಲ್ಲಾ

ಅಜ್ಞಾನದ ಲೋಕದಲಿ ಸುಜ್ಞಾನ  ನೋಡು
ಮಾಯದ ಜಗದಲಿ ನೀ ಬೆಳಕಾಗಿ ಮೂಡು
ಕಲಿಯುತ್ತಾ ಕಲಿಸುತ್ತಾ ಸೇವೆಯ ಮಾಡು ಅಂದಕಾರ ಅಳಿಸಿ ಒಮ್ಮೆ ನೋಡ ಬಿಡು(1)

ಮೋಸ ಮಾಡುವರಿಗೆ ನೀ  ಗುರಿಯಾಗುವೆ
ನಿನ್ನ   ಆಸ್ತಿಪಾಸ್ತಿಗಳನ್ನ ಕಳೆದುಕೊಳ್ಳುವೆ
ನೀ ನಂಬಿದವರು ಹಾಕುವರು ಚೂರಿ
ನಿನಗೆ ಸಿಗುವುದು ಸುಡುಗಾಡದ ದಾರಿ (2)


 ಕಲಿತ ಅಕ್ಷರ ಅಳಕದು ಜಗದಾಗ
ಗಳಿಸಿದ ಆಸ್ತಿ ಹಾಳಾಗುವುದು ನೆಲದಾಗ
ನೆನಸುವರು ನಿನ್ನ ಜ್ಞಾನ ಮನುಜರೆಲ್ಲಾ
ನೆನೆಯಲಾರವು ಮಳೆ ಬಂದರು ಅಕ್ಷರಗಳೆಲ್ಲಾ (3)



ರಾಹೀಲ್ ರಾಜಾಭಕ್ಷು ಸಿ ಎಮ್
ಸಂಘಟನ ಕಾರ್ಯದರ್ಶಿ
ಹನಿ ಹನಿ ಇಬ್ಬನಿ ಜಿಲ್ಲಾ ಘಟಕ 
     ಹಾವೇರಿ
[23/05, 3:09 p.m.] A Raju: ದ್ರೋಹಿಗಳು

ಆಸೆ ಆಕಾಂಕ್ಷೆಗಳ ಹೊತ್ತ ಬುದ್ದಿಹೀನರಿಗೆ
ದುರಾಸೆಯಿಂದ ಸಮಾಜ ಹಾಳು  ಮಾಡುವವರಿಗೆ
ನಂಬಿಕೆ ಬಿಟ್ಟು ನಂಬಿದವರಿಗೆ  ದ್ರೋಹ... ಬಗೆದವರಿಗೆ
ನನ್ನ ದಿಕ್ಕಾರ ನನ್ನ ದಿಕ್ಕಾರ....

ಬೇರೆಯವರ ಅಲ್ಲಗಳೆದು  ಜೀವಸುವರು
ನೀತಿ ನಿಯಮ ಗಾಳಿಗೆ ತೂರವರು
ದಾರಿ ದಾರಿಯಲಿ ಹಲಗೆ ಬಾರಿಸುವರು
ಇವರು ಮನುಜರೆ?  ಇವರಿಗೆ ನನ್ನ ದಿಕ್ಕಾರ

ಜಾತಿ ಜಾತಿ ಅಂಥ ಜಾತಿ ಬೆಳೆಸುವರು           ದೇವರ ನಾಮದಿಂದ ಹುಂಡಿ ಬೆಳೆಸುವರು
ಭರವಸೆಯ ಮಾತಿನಲ್ಲಿ ಅಧಿಕಾರ..... ಮಾಡುವವರು
ಅಹಂಕಾರದಿಂದ ಅಲ್ಪರ ಮೇಲೆ ದೌರ್ಜನ್ಯ
ಮಾಡುವವರು...
ಇವರಿಗೆ ನನ್ನ ದಿಕ್ಕಾರ.. ದಿಕ್ಕಾರ..

ಸೌಂದರ್ಯ ನೋಡಿ ಮಾನ ಕೆಡಸುವ
ಹತ್ತಿರಯಿದ್ದು ಚೂರಿ ಹಾಕುವ
ನಟಿಸಿ ನರ್ತನ   ನೋಡುವ
ಸುಳ್ಳಿಗೆ ಸುಳ್ಳು  ಹೇಳಿವ
ಜನರಿಗೆ ನನ್ನ ದಿಕ್ಕಾರ....ದಿಕ್ಕಾರ

ಮಕ್ಕಳಿಗೆ ಶಿಕ್ಷಣ ನೀಡದ ಮನುಜ
ಕೆಲಸದಿ ಪ್ರಾಮಾಣಿಕತೆಯಿಲ್ಲದ ಮನುಜ
ನೆಲ ಜಲ ಪಡೆದು ನೆಲಕ್ಬಳಿಸುವ ಮನುಜ
ದೇಶದಲ್ಲಿದ್ದ ದೇಶದ್ರೋಹದ  ಮನುಜ
 ಇವರಿಗೆ ನನ್ನ ದಿಕ್ಕಾರ.....ದಿಕ್ಕಾರ

ಕನ್ನಡ ನಾಡು ನುಡಿಗೆ ಮೋಸ ಮಾಡುವ
ಕನ್ನಡ ತಾಯಿಯನ್ನು ದಿಕ್ಕರಿಸುವ
ಕನ್ನಡವನ್ನು ಕಡೆಕಣಿಸಿ ಬದುಕವ
ಕನ್ನಡ ಸಾಹಿತ್ಯ ನಾಶ ಮಾಡುವ
ಇವರಿಗೆ ಸದಾ ನಾನು ದಿಕ್ಕಾರ..ಸದಾ ದಿಕ್ಕಾರ


ರಾಹೀಲ್ ರಾಜಾಭಕ್ಷು
ಸಹ ಶಿಕ್ಷಕರು 
೯೬೧೧೬೨೬೨೭೭
[23/05, 3:09 p.m.] A Raju: ಗಜಲ್

      ನನ್ನ ಪ್ರೀತಿಯ ಗೆಳತಿ

ನಿನ್ನ  ಆ ಕಣ್ಣ ನೋಟ ಹೇಗೆ ಮರೆಯಲಿ
ಸದಾ ನನ್ನ ಮನ ನೋಯುತ್ತದೆ..
ಆಸೆಯ ಬೀಜ ಬಿತ್ತಿ ನೀ ಏಕೆ ದೂರ ಹೋದೆ
ಕಲ್ಪನೆಯಲಿ ಎನ್ನ ನಯನ ನೊಯುತ್ತದೆ..

ನಿನ್ನ ತುಟಿಯ ಆ ಧ್ವನಿ ತೊರೆಯಲಾರೆ
ನೆನಪಾದಗ ಎನ್ನ ಪ್ರಜ್ಞೆ ನೊಯುತ್ತದೆ..
ಕೂಡಿ ಹಾಡಿದ ಆ ಹಾಡುಗಳ ಮಧುರತೆ
ಒಮ್ಮೆ ನಾ ಹಾಡಿದಾಗ ನೆನಪಿದಿ ಧ್ವನಿಪೆಟ್ಟಿಗೆ ನೊಯೂತ್ತದೆ...

ಆಗಸದಿ ಆಕ್ಷಣಗಳು ನಾ ಹೇಗೆ ಮರೆಯಲಿ
ಬೇರೆಯರನ್ನು ನೋಡಿದಾಗ ನೆನಪು ನೋಯುತ್ತದೆ...
ನಾ ಬರೆದ ಆ ಸಾಲುಗಳು ಸ್ವರ್ಣಾಕ್ಷರಗಳು
ಕೊಟ್ಟ ಓಲೆ ಕಂಡಾಗ ಹೃದಯ ನೊಯುತ್ತದೆ

ಅನ್ಯರ ಮಾತಿಗೆ ಭೆಲೆ ನೀಡಿ ಮರೆತೆಯಾ 
ಗೆಳತಿ ಆ ವಿಷಯ ನೆನಪಾಗಿದಾಗಲೆಲ್ಲಾ ಎನ್ನ ಮನಸು ನೊಯುತ್ತದೆ...
ಸೋತು ಬೆಂಡಾಗಿ ಬಾಗಿ ಸಾಗುತ್ತಿದೆ ಎನ್ನ ಜೀವ
ನಾ ಲೋಕವ ತೋರಿದಾಗ ಭಗವಂತನ ಪ್ರಶ್ನೆಗೆ ಎನ್ನ  ಇಡೀ ದೇಹವೇ ನೊಯುತ್ತದೆ...


ರಾಹೀಲ್ ರಾಜಾಭಕ್ಷು...

1 comment:

  1. Sir super

    Sir I want one or two

    ಕವನ in ಶಿವಾಜಿ ಮಹಾರಾಜ

    Please send

    ReplyDelete